Gulbarga station gets Hit-tech Cleaning Machine to keep station Tidy!
ಗುಲ್ಬರ್ಗ: ಇಲ್ಲಿಯ ರೈಲ್ವೆ ನಿಲ್ದಾಣದ ಪ್ಲ್ಯಾಟ್ ಫಾರ್ಮ್ಗಳಲ್ಲಿನ ಕಸ ಹಾಗೂ ಟ್ರ್ಯಾಕ್ಗಳಲ್ಲಿನ ಕಶ್ಮಲ ಶುಚಿಗೊಳಿಸಲು ವಿದ್ಯುತ್ ಚಾಲಿತ ಸ್ಕ್ರಬಿಂಗ್ ಹಾಗೂ ಜೆಟ್ ಹೈಟೆಕ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ, ಕಸವೂ ಕೂಡ ಹೆಚ್ಚುತ್ತಿದೆ. ಜಾಗೃತಿ ಕೊರತೆಯಿಂದ ಅಲ್ಲಲ್ಲಿ ಕಸ ಹಾಗೂ ತ್ಯಾಜ್ಯ ಚೆಲ್ಲುವುದು, ಬೇಕಾಬಿಟ್ಟಿ ಉಗುಳುವುದು ಸಾಮಾನ್ಯವಾಗಿದೆ. ಇದು ನಿಲ್ದಾಣದ ಉತ್ತಮ ಪರಿಸರಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಈ ಯಂತ್ರಗಳನ್ನು ರೈಲ್ವೆ ಇಲಾಖೆ ಬಳಕೆ ಮಾಡುತ್ತಿದೆ.
ಕ್ರಬಿಂಗ್ ಎಂಬುದು ವಿದ್ಯುತ್ ಚಾಲಿತ ಯಂತ್ರ....
more... ನೀರು, ಫಿನಾಯಿಲ್ ಮತ್ತಿತರ ಶುಚಿತ್ವಕ್ಕೆ ಬಳಸುವ ದ್ರವ್ಯಗಳನ್ನು ಈ ಯಂತ್ರದಲ್ಲಿ ತುಂಬಲಾಗುತ್ತದೆ. ನೆಲಹಾಸಿಗೆ ಈ ನೀರು ಸಿಂಪಡಿಸಲಾಗುತ್ತದೆ. ನಂತರ ಯಂತ್ರ ತೇವಾಂಶ ಹಿರಿಕೊಂಡು ನೆಲವನ್ನು ಉಜ್ಜುವ ಮೂಲಕ ಶುಚಿಗೊಳಿಸುತ್ತದೆ. ಕಡಿಮೆ ಮಾನವ ಸಂಪನ್ಮೂಲದಿಂದ ಹೆಚ್ಚು ಕೆಲಸ ಮಾಡುವ ಯಂತ್ರವಿದು. ಇದರ ಬೆಲೆ ರೂ 1.60 ಲಕ್ಷ.
ಪ್ರಯಾಣಿಕರಲ್ಲಿ ಜಾಗೃತಿ ಅಗತ್ಯ. ನಿಲ್ದಾಣಕ್ಕೆ ಪ್ರತಿದಿನವೂ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಬರುವ, ಹೊಗುವ ಪ್ರಕ್ರಿಯೆ ಇರುತ್ತದೆ. ನಿತ್ಯ ಸುಮಾರು 17 ಸಾವಿರಕ್ಕೂ ಹೆಚ್ಚು ಟಿಕೆಟ್ ನೀಡಲಾಗುತ್ತದೆ. ಮೂರು ಪ್ಲ್ಯಾಟ್ ಫಾರ್ಮ್ಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. 70ಕ್ಕೂ ಹೆಚ್ಚು ರೈಲುಗಳ ಸಂಚಾರವಿದೆ. ಮುಖ್ಯವಾಗಿ ನಿಲ್ದಾಣವನ್ನು ಶುಚಿಯಾಗಿಡಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಗುಲ್ಬರ್ಗ ನಿಲ್ದಾಣದಲ್ಲಿ ಸ್ಕ್ರಬಿಂಗ್ ಹಾಗೂ ಜೆಟ್ ಯಂತ್ರಗಳನ್ನು ಜುಲೈ 13ರಿಂದ ಬಳಸಲಾಗುತ್ತಿದೆ. ಕಸವನ್ನು ಎಲ್ಲೆಂದರಲ್ಲಿ ಹಾಕುವ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತದೆ.
–ಡಿ.ವಿ. ರಮಣ್ರಾವ್, ನಿಲ್ದಾಣ ವ್ಯವಸ್ಥಾಪಕ.
For full details please click below link
click here